Home
ತಾಳಿಕೋಟಿ ಪುರಸಭೆಯ ಸಾರ್ವಜನಿಕ ಕುಂದು ಕೊರತೆ ವಿಭಾಗಕ್ಕೆ, ಸಾರ್ವಜನಿಕರು ತಮ್ಮ ದೂರುಗಳನ್ನು ಪತ್ರ , ಮತ್ತು ದೂರವಾಣಿ ಹಾಗೂ ಇಂಟರನೆಟ ಮೂಲಕ ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ: 088356-266553 ಮತ್ತು 08356-266223
Brief Introduction of Talikote TMC:- The Town Municipal Council (TMC) Talikote was constituted in 1973 It has a population of 36000 as per census 2001. The TMC has 23 wards and equal number of councilors and 5 Numbers of Nominee councilors, Talikote TMC stretches to an area of 11.96 Sq.Kms. ತಾಳಿಕೋಟಿ ಪಟ್ಟಣದ ಸಂಕ್ಷಿಪ್ತ ವರದಿ: ತಾಳಿಕೋಟಿ ಪಟ್ಟಣವು ಬಿಜಾಪೂರ ಜಿಲ್ಲೆಯ ಮುದ್ದೇಬಿಹಾಳ ತಾಲುಕಿನಲ್ಲಿ ಬರುವ ಹೋಬಳಿ ಮಟ್ಟದ ಅತೀ ದೊಡ್ಡ ಪಟ್ಟಣವಾಗಿರುತ್ತದೆ. ಬಿಜಾಪೂರದಿಂದ ಬಳ್ಳಾರಿ ಹಾಗೂ ರಾಯಚೂರ ರಸ್ತೆಯಲ್ಲಿ ವಿಜಾಪೂರದಿಂದ ಪೂರ್ವದಿಕ್ಕಾಗಿ 80 ಕಿ.ಮಿ ಅಂತರದಲ್ಲಿ ಇದ್ದು ಬೆಳಗಾಂವ ವಿಭಾಗದ ಕಟ್ಟಕಡೆಯ ಪಟ್ಟಣವಿದ್ದು ಹತ್ತಿರದಲ್ಲಿ ಅಂದರೆ ಆರೇಳು ಕಿ.ಮಿ ಅಂತರದಲ್ಲಿ ಹೈದರಾಬಾದ ಕರ್ನಾಟಕ ಪ್ರದೇಶ ಪ್ರಾರಂಭವಾಗಿರುತ್ತದೆ ಪಟ್ಟಣಕ್ಕೆ ಅಂದಾಜು 50 ಕಿ.ಮಿ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ-13 ಸಂಪರ್ಕವಿರುತ್ತದೆ. ಪಟ್ಟಣದ ವ್ಯಾಪ್ತಿಯು 11-96 ಚ.ಕಿ.ಮಿ ಹೊಂದಿದ್ದು ಡೋಣಿ ನದಿ ದಡದಲ್ಲಿದ್ದು 1565ರಲ್ಲಿ ನಡೆದ ತಾಳಿಕೋಟಿಯ ಕಾಳಗ ವೆಂಬುವದು ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣವಾಗಿದ್ದು ಮುಖ್ಯ ಕೃಷಿ ಉತ್ಪನ್ನಗಳಾದ ಬಿಳೆ ಜೋಳ,ಗೋದಿ,ಕಡ್ಲಿ,ಸೂರ್ಯಕಾಂತಿ ಪ್ರಸಿದ್ದ ಬೆಳೆಗಳನ್ನು ಬೆಳೆಯುವ ಒಣ ಬೇಸಾಯಕ್ಕೆ ಹೇಳಿ ಮಾಡಿಸದಂತೆ ಭೂ ಪ್ರದೇಶ ಹೊಂದಿದ ಪ್ರದೇಶವಾಗಿದೆ.ಅಲ್ಲದೇ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಖ್ಯ ಸ್ಥಳವಾಗಿದೆ.
ಜನನ-ಮರಣ(Birth and Death Online Application) :-1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.
ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ :- ತಾಳಿಕೋಟಿ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ
| Last Updated : 09-02-2012 This Page is Maintained By : Sri R N Madabal (R.I) |

